ಗುಪ್ತಗಾಮಿನಿ ಧಾರಾವಾಹಿ ಈ-ಟಿವಿ ಕನ್ನಡದಲ್ಲಿ ಸಂಜೆ ೬.೩೦ ಕ್ಕೆ ಪ್ರಸಾರವಾಗಿತ್ತು. 2003 ರಲ್ಲಿ, ಈ ಧಾರಾವಾಹಿಯು ಕರ್ನಾಟಕ ಪ್ರದೇಶದ ಅತ್ಯಂತ ಜನಪ್ರಿಯ ಟಿವಿ ಧಾರಾವಾಹಿಗಳಲ್ಲಿ ಒಂದಾಗಿತ್ತು . 2008 ರಲ್ಲಿ ಗುಪ್ತಗಾಮಿನಿ ಐದು ವರ್ಷಗಳನ್ನು ಪೂರ್ಣಗೊಳಿಸಿತು. ಖ್ಯಾತ ಪತ್ರಕರ್ತೆ ಸಂಧ್ಯಾ ಪೈ ಈ ಧಾರವಾಹಿಯನ್ನು ನಿರ್ಮಿಸಿದ್ದರೆ, ವಿಜಯ್‌ ಸಾರಾಯಿ ಈ ಧಾರವಾಹಿಯನ್ನು ನಿರ್ದೇಶಿಸಿದ್ದಾರೆ. ಮಣಿಪಾಲ್ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ ಲಿಮಿಟೆಡ್ ಬ್ಯಾನರ್ ಅಡಿಯಲ್ಲಿ ಈ ಧಾರವಾಹಿ ನಿರ್ಮಾಣವಾಗಿದೆ. ಡಿಸೆಂಬರ್ 2008 ರಲ್ಲಿ, ಇದು ಒಟ್ಟು 1300 ಸಂಚಿಕೆಗಳನ್ನು ಪೊರೈಸಿ ಕರ್ನಾಟಕದಲ್ಲಿ ಈ ಧಾರವಾಹಿಯ ಸಂಚಿಕೆಗಳು ದಾಖಲೆಗಳನ್ನು ಮುರಿದಿತ್ತು . ಕನ್ನಡ ವೀಕ್ಷಕರಿಗೆ ತನ್ನ ಅಭಿರುಚಿಯನ್ನು ಕಾಯ್ದುಕೊಳ್ಳುವ ಕಂಟೆಂಟ್ ಇದರಲ್ಲಿತ್ತು. ಆದ್ದರಿಂದಲೇ ಧಾರಾವಾಹಿ ಇಷ್ಟು ದೀರ್ಘಾವಧಿಯನ್ನು ತಲುಪಿದೆ ಎಂದು ಜನರು ಭಾವಿಸಿದ್ದಾರೆ. ಈ ಧಾರವಾಹಿಯು ಕರ್ನಾಟಕಕ್ಕೆ ಹಲವು ಪ್ರತಿಭಾವಂತ ಕಲಾವಿದರನ್ನು ಪರಿಚಯಿಸಿದೆ . == ಕಥೆ == ಕೌಟುಂಬಿಕ ಘಟನೆಗಳನ್ನು ಆಧಾರಿತ ಧಾರವಾಹಿ ಗುಪ್ತಗಾಮಿನಿ. ಈ ಧಾರವಾಹಿಯು ಭಾವನ ಪಾತ್ರದಾರಿಯ ಮೇಲೆ ಕೇಂದ್ರಿಕೃತವಾಗಿತ್ತು. ಸ್ವಾಭಿಮಾನದ ಹೆಣ್ಣು, ಕುಟುಂಬಕ್ಕಾಗಿ ಎಲ್ಲವನ್ನು ತ್ಯಾಗ ಮಾಡಲು ಸಿದ್ದವಾಗಿರುವ ಹೆಣ್ಣಿನ ಕಥೆ. == ಪ್ರಶಸ್ತಿಗಳು == ಧಾರಾವಾಹಿಯಲ್ಲಿನ ಭಾವನ ಪಾತ್ರಕ್ಕಾಗಿ ನಟಿ ಸುಷ್ಮಾಗೆ 2007 ರಲ್ಲಿ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ವತಿಯಿಂದ ʼಉತ್ತಮ ನಟಿ ಪ್ರಶಸ್ತಿʼ ಕೂಡಾ ದೊರೆತಿದೆ. ನಿರ್ಮಾಪಕಿ ಸಂಧ್ಯಾ ಎಸ್ ಪೈ ಅವರಿಗೆ ಈ ಧಾರಾವಾಹಿಗಾಗಿ 2009 ರಲ್ಲಿ 'ಖ್ಯಾತ ಧಾರಾವಾಹಿ ಎಂಬ ವಿಶೇಷ ಪ್ರಶಸ್ತಿ' ದೊರೆತಿದೆ. == ಕಲಾವಿದರು == ಸುಷ್ಮಾ ಕೆ. ರಾವ್ ರಾಜೇಶ್‌ ನಟರಂಗ ಸುಂದರಶ್ರೀ ಗ್ರೀಷ್ಮಾ ಉದಯ್ ಜ್ಯೋತಿ ಶಂಕರ್‌ ಆರ್ಯನ್‌ ಮಾನಸಿ ವಾಸುದೇವನ್ == ಉಲ್ಲೇಖಗಳು ==